1.
ಜನರನ್ನು ನಿರ್ಲಕ್ಷಿಸುವ ಮೂಲಕ ಅವರು ಹೇಳಿದ್ದನ್ನು ಮತ್ತೊಮ್ಮೆ ಹೇಳುವಂತೆ (ಪುನರುಚ್ಚರಿಸುವಂತೆ) ಮಾಡುತ್ತೇನೆ.
1 out of 25
2.
ಯಾರಾದರೂ ಹೇಳಿದ್ದನ್ನು ಮತ್ತೊಮ್ಮೆ ಹೇಳಿದಾಗಲೂ ನನಗೆ ಅರ್ಥವಾಗಲಿಲ್ಲ ಎಂದಾದರೆ ಅವರನ್ನು ಮತ್ತೊಮ್ಮೆ ಹೇಳಲು ಕೇಳುತ್ತೇನೆ.
2 out of 25
3.
ಕೇಳಿಸಿಕೊಳ್ಳಲು ಕಷ್ಟವೆನಿಸುವ ಸನ್ನಿವೇಶಗಳಲ್ಲಿ ಯಾವ ಜಾಗದಲ್ಲಿ ಕುಳಿತರೆ ಚೆನ್ನಾಗಿ ಕೇಳಿಸಬಹುದೋ ಅಲ್ಲಿ ಕುಳಿತುಕೊಳ್ಳುತ್ತೇನೆ
3 out of 25
4.
ಕೇಳಿಸಿಕೊಳ್ಳಲು ಕಷ್ಟವೆನಿಸುವ ಸನ್ನಿವೇಶಗಳಲ್ಲಿ ಯಾವ ಜಾಗದಲ್ಲಿ ಕುಳಿತರೆ ಚೆನ್ನಾಗಿ ಕೇಳಿಸಬಹುದೋ ಅಲ್ಲಿ ಕುಳಿತುಕೊಳ್ಳುತ್ತೇನೆ.
4 out of 25
5.
ಬೇರೆಯವರು ಮಾತನಾಡುವಾಗ ಕೇಳಿಸಿಕೊಳ್ಳುವುದು ಕಷ್ಟವಾದರೆ ಮಧ್ಯದಲ್ಲಿ ಅವರನ್ನು ತಡೆಯುತ್ತೇನೆ.
5 out of 25
6.
ನನ್ನೊಂದಿಗೆ ಮಾತನಾಡುವ ಮೊದಲು ನನ್ನ ಗಮನ ಸೆಳೆಯುವಂತೆ ನನ್ನ ಕುಟುಂಬದವರಿಗೆ ಹೇಳಿದ್ದೇನೆ.
6 out of 25
7.
ಇತರರೊಂದಿಗೆ ಮಾತನಾಡುವಾಗ ಅವರ ಮಾತುಗಳನ್ನು ಕೇಳಿಸಿಕೊಳ್ಳುವುದನ್ನು ತಡೆಯಲು ನಾನೇ ಹೆಚ್ಚು ಮಾತನಾಡುತ್ತೇನೆ.
7 out of 25
8.
ಬೇರೆಯವರು ಮಾತನಾಡಿದ್ದು ಅರ್ಥವಾಗದಿದ್ದಾಗ ಮತ್ತೆ ಹೇಳುವಂತೆ ಕೇಳಿಕೊಳ್ಳುತ್ತೇನೆ.
8 out of 25
9.
ಯಾರಾದರೂ ಮಾತನಾಡುವುದು ಅರ್ಥ ಮಾಡಿಕೊಳ್ಳಲು ಕಷ್ಟವಾದರೆ ಅವರ ತುಟಿ ಚಲನೆಗಳ ಮೇಲೆ ಹೆಚ್ಚಿನ ಗಮನ ಹರಿಸುತ್ತೇನೆ.
9 out of 25
10.
ನನ್ನೊಂದಿಗೆ ಮಾತನಾಡುವವರಿಗೆ ನನಗೆ ಅರ್ಥವಾಗದೆ ಇದ್ದದ್ದನ್ನು ಮತ್ತೆ ಮತ್ತೆ ಹೇಳಲು ಕಿರಿಕಿರಿಯಾದಂತೆ ಕಂಡು ಬಂದರೆ ಮತ್ತೆ ಹೇಳಲು ಕೇಳುವುದನ್ನು ನಿಲ್ಲಿಸುತ್ತೇನೆ ಮತ್ತು ಅವರು ಹೇಳುತ್ತಿರುವುದು ಅರ್ಥವಾದಂತೆ ನಟಿಸುತ್ತೇನೆ.
10 out of 25
11.
ಮದುವೆ ಇತ್ಯಾದಿ ಸಮಾರಂಭಗಳಲ್ಲಿ ಕೇಳಿಸಿಕೊಳ್ಳಲು ತೊಂದರೆಯಾಗುತ್ತದೆ ಎಂದು ಅನ್ನಿಸಿದರೆ ಅಂತಹ ಸಮಾರಂಭಗಳಿಗೆ ಹೋಗುವುದನ್ನು ತಪ್ಪಿಸುತ್ತೇನೆ.
11 out of 25
12.
ನನ್ನ ಶ್ರವಣದೋಷದ ಕಾರಣದಿಂದಾಗಿ ಬೇರೆಯವರೊಂದಿಗೆ ಮಾತುಕತೆ ನಡೆಸುವುದನ್ನು ತಪ್ಪಿಸುತ್ತೇನೆ.
12 out of 25
13.
ನಾನು ಕುಳಿತ ಜಾಗದಲ್ಲಿ ನನಗೆ ಸರಿಯಾಗಿ ಕೇಳಿಸುತ್ತಿಲ್ಲ ಎಂದಾದರೆ ನಾನು ಬೇರೆ ಜಾಗಕ್ಕೆ ಹೋಗಿ ಕುಳಿತುಕೊಳ್ಳುತ್ತೇನೆ.
13 out of 25
14.
ಯಾರಾದರೂ ಹೇಳಿದ್ದು ನನಗೆ ಅರ್ಥವಾಗಲಿಲ್ಲ ಎಂದಾದರೆ ನನಗೆ ಅರ್ಥವಾದಂತೆ ನಟಿಸುತ್ತೇನೆ.
14 out of 25
15.
ಸಮಾರಂಭಗಳಲ್ಲಿ ಮತ್ತು ಸಾಮಾಜಿಕ ಕೂಟಗಳಲ್ಲಿ ನಾನು ಚೆನ್ನಾಗಿ ಬೆಳಕಿರುವ ಜಾಗದಲ್ಲಿ ಇರುತ್ತೇನೆ. ಇದರಿಂದ ನನಗೆ ಮಾತನಾಡುವರ ಮುಖ ಕಾಣಿಸುತ್ತದೆ.
15 out of 25
16.
ನನ್ನ ಸ್ನೇಹಿತರು ಅಥವಾ ಕುಟುಂಬದವರು ಮಾತನಾಡುವುದನ್ನು ಅರ್ಥ ಮಾಡಿಕೊಳ್ಳಲು ಕಷ್ಟವಾದಾಗ ನನಗೆ ಶ್ರವಣದೋಷ ಇದೆ ಎಂದು ಅವರಿಗೆ ನೆನಪಿಸುತ್ತೇನೆ.
16 out of 25
17.
ನನ್ನ ಶ್ರವಣದೋಷದ ಕಾರಣದಿಂದಾಗಿ ಅಪರಿಚಿತ ವ್ಯಕ್ತಿಗಳೊಂದಿಗೆ ಮಾತನಾಡುವುದನ್ನು ನಾನು ತಪ್ಪಿಸುತ್ತೇನೆ.
17 out of 25
18.
ಗುಂಪಿನಲ್ಲಿ ಕೇಳಿಸಿಕೊಳ್ಳುವ ಸಂದರ್ಭದಲ್ಲಿ ಎಲ್ಲಿ ಕುಳಿತರೆ ಚೆನ್ನಾಗಿ ಕೇಳುಸುತ್ತದೋ ಅಲ್ಲಿ ಕುಳಿತುಕೊಳ್ಳಲು ಪ್ರಯತ್ನಿಸುತ್ತೇನೆ.
18 out of 25
19.
ಯಾರಾದರೂ ಮಾತನಾಡಿದ್ದು ನನಗೆ ಅರ್ಥವಾಗದಿದ್ದರೆ ನಾನು ಅವರು ಹೇಳುವುದಕ್ಕೆ ಗಮನ ಕೊಡುವುದಿಲ್ಲ.
19 out of 25
20.
ಹಿನ್ನೆಲೆಯಲ್ಲಿ ಗದಲವಿದ್ದಾಗ ನನಗೆ ಏಕಾಗ್ರತೆಯಿಂದ ಕೇಳಿಸಿಕೊಳ್ಳಲು ಸಾಧ್ಯವಿರುವ ಜಾಗದಲ್ಲಿ ಕುಳಿತುಕೊಳ್ಳುತ್ತೇನೆ.
20 out of 25
21.
ನನ್ನ ಜೊತೆ ಮಾತನಾಡುವ ಮೊದಲು ನನ್ನ ಗಮನವನ್ನು ಸೆಳೆಯುವಂತೆ ನನ್ನ ಸ್ನೇಹಿತರಿಗೆ ಮತ್ತು ನನ್ನ ಸಹೋದ್ಯೋಗಿಗಳಿಗೆ ಹೇಳಿದ್ದೇನೆ.
21 out of 25
22.
ಯಾರಾದರೂ ಹೇಳಿದ್ದು ನನಗೆ ಅರ್ಥವಾಗದಿದ್ದರೆ ನನಗೆ ಶ್ರವಣದೋಷ ಇದೆ ಎಂದು ಅವರಿಗೆ ವಿವರಿಸುತ್ತೇನೆ.
22 out of 25
23.
ಮಾತುಕತೆಯನ್ನು ಅರ್ಥಮಾಡಿಕೊಳ್ಳಲು ಕಷ್ಟವಾದರೆ ನಾನು ಗಮನವಿಟ್ಟು ಕೇಳಿಸಿಕೊಂಡು ಮುಖ್ಯವಾದ ವಿಷಯಗಳನ್ನು ತಿಳಿದುಕೊಳ್ಳಲು ಪ್ರಯತ್ನಿಸುತ್ತೇನೆ.
23 out of 25
24.
ಯಾರಾದರೂ ತುಂಬಾ ಮೆಲ್ಲಗೆ ಮಾತನಾಡುತ್ತಿದ್ದಾರೆ ಎಂದು ನನಗೆ ಅನ್ನಿಸಿದರೆ ಅವರಿಗೆ ಜೋರಾಗಿ/ಗಟ್ಟಿಯಾಗಿ ಮಾತನಾಡುವಂತೆ ತಿಳಿಸುತ್ತೇನೆ.
24 out of 25
25.
ಸಾಧ್ಯವಿದ್ದಲ್ಲಿ ನಾನು ಮಾತನಾಡುತ್ತಿರುವರ ಮುಖವನ್ನು ನೋಡಲು ಪ್ರಯತ್ನಿಸುತ್ತೇನೆ.
25 out of 25