ಅಪೆಂಡಿಕ್ಸ್
ಕೆಲವರು ಹೇಳಿದ್ದು ನಿಮಗೆ ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
- ಅವರು ಮಾತನಾಡಲು ಆರಂಭಿಸಿದಾಗ ನೀವು ಗಮನ ಹರಿಸದೇ ಇರಬಹುದು, ಹೀಗಿರುವಾಗ, ಹೆಚ್ಚು ನಿಧಾನವಾಗಿ ಈಗಾಗಲೇ ಹೇಳಿರುವ ಭಾಗ ಅಥವಾ ಎಲ್ಲವನ್ನೂ ಪುನರಾವರ್ತಿಸಲು ಕೇಳಬಹುದು, ಉದಾಹರಣೆಗೆ: ಓ ಬಹುಶಃ ನೀವು ತುಂಬಾ ವೇಗವಾಗಿ ಮಾತನಾಡುತ್ತಿದ್ದೀರಿ ಮತ್ತು ನೀವು ಹೇಳಿದ ಪ್ರತಿಯೊಂದು ಪದವನ್ನು ಕೇಳಲು ಕಷ್ಟವಾಯಿತು.
- ಸ್ವಲ್ಪ ಜೋರಾಗಿ ಈಗಾಗಲೇ ಹೇಳಿರುವ ಭಾಗ ಅಥವಾ ಎಲ್ಲವನ್ನೂ ನೀವು ಪುನರಾವರ್ತಿಸಲು ಕೇಳಬಹುದು.
- ಒಂದು ಅಥವಾ ಎರಡು ಪ್ರಮುಖ ಪದಗಳನ್ನು ಪುನರಾವರ್ತಿಸಲು ಕೇಳಬಹುದು. ಉದಾಹರಣೆಗೆ: ರೈಟ್ ಪಾರ್ಕ್‌ನಲ್ಲಿ ಕೆಲವು ವಿದ್ಯಾರ್ಥಿಗಳು ಆಡುತ್ತಿರುವುದನ್ನು ನಾನು ನೋಡಿದೆ. → ರೈಟ್ ಪಾರ್ಕ್, ಅಥವಾ ಅಲ್ಲಿ ಕೆಲವು ವಿದ್ಯಾರ್ಥಿಗಳು ಆಟವಾಡುವುದನ್ನು ನಾನು ನೋಡಿದೆ.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ಪ್ರಮುಖ ಭಾಗಗಳಿಗೆ ಒತ್ತು ನೀಡಲು ಮತ್ತು ಅವುಗಳನ್ನು ಸುಲಭವಾಗಿ ಅರ್ಥಮಾಡಿಕೊಳ್ಳಲು ನೀವು ಹೇಳಿದ್ದನ್ನು ಎರಡು ಚಿಕ್ಕ ವಾಕ್ಯಗಳಾಗಿ ಹೇಳಿರಿ ಎಂದು ಕೇಳಬಹುದು.
ಉದಾಹರಣೆಗೆ: ರೈಟ್ ಪಾರ್ಕ್‌ನಲ್ಲಿ ಕೆಲವು ವಿದ್ಯಾರ್ಥಿಗಳು ಆಡುತ್ತಿರುವುದನ್ನು ನಾನು ನೋಡಿದೆ. → ನಾನು ಕೆಲವು ವಿದ್ಯಾರ್ಥಿಗಳು ಆಡುತ್ತಿರುವುದನ್ನು ನೋಡಿದೆ. ಅವರು ರೈಟ್ ಪಾರ್ಕ್ ನಲ್ಲಿ ಇದ್ದರು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ತಪ್ಪಿಹೋದ ಮಾತಿನ ಮೇಲೆ ಗಮನ ಕೊಡುವುದು ಅಥವಾ ಭಾಗಶಃ ಅರ್ಥಮಾಡಿಕೊಂಡ ಸಂದೇಶವನ್ನು ಮತ್ತು ಸಂಭಾಷಣೆಯ ಹರಿವನ್ನು ಅಡ್ಡಿಪಡಿಸುವುದನ್ನು ತಪ್ಪಿಸಲು ಒಂದು ನಿರ್ದಿಷ್ಟ ಪದ ಅಥವಾ ಸನ್ನಿವೇಶಕ್ಕೆ ಗಮನ ಕೊಡುವುದು. ಉದಾಹರಣೆಗೆ: ರಾಜಕೀಯ ಭಾಷಣದ ವೇಳೆ ತಪ್ಪಿಹೋದ ಮಾತಿನ ಮೇಲೆ ಗಮನ ಕೊಡುವುದು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ಬೇರೆಯವರನ್ನು ಸಹಾಯ ಮಾಡಲು ಕೇಳಬಹುದು, ಅವರು ಮಾಹಿತಿಯನ್ನು ತಿಳಿಸುತ್ತಾರೆ. ಉದಾಹರಣೆಗೆ: ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂ ನಲ್ಲಿ ನಿಂತಾಗ ಬೇರೆ ಭಾಷೆಯಲ್ಲಿ ಹೇಳುವ ಮಾಹಿತಿ ತಿಳಿಸಲು ಬೇರೆಯವರ ಸಹಾಯ ಕೇಳುವುದು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ಮಾತನಾಡುತ್ತಿರುವವರನ್ನು ನೋಡಿ ಅವರ ದೇಹ ಭಾಷೆ, ಮುಖದ ಅಭಿವ್ಯಕ್ತಿಗಳು ಮತ್ತು ತುಟಿ ಚಲನೆಗಳನ್ನು ಓದಬಹುದು ಮತ್ತು ಕೇಳಲು ಕಷ್ಟಕರವಾದ ಮಾಹಿತಿಯನ್ನು ಸ್ಪಷ್ಟಪಡಿಸಬಹುದು. ಉದಾಹರಣೆಗೆ: ತುಂಬ ಸದ್ದು-ಗದ್ದಲದ ನಡುವೆ ಮಾತು ಅರ್ಥ ಆಗದಿದ್ದಾಗ ಅವರ ತುಟಿ ನೋಡಿ ಮಾತನ್ನು ಅರ್ಥ ಮಾಡಿಕೊಳ್ಳುವುದು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ತುಂಬ ದೊಡ್ಡ ವಾಕ್ಯದಲ್ಲಿ ಬೇಕಾದ ಒಂದೇ ಒಂದು ಪದಕ್ಕೆ ಮಾತ್ರ ಗಮನ ಕೊಡಬಹುದು. ಉದಾಹರಣೆಗೆ: ಅರ್ಥ ಮಾಡಿಕೊಳ್ಳಲು ತುಂಬಾ ಕಷ್ಟವಾದ ರಾಜಕೀಯ ಮಾತುಕತೆಯಲ್ಲಿ ಒಂದು ನಿರ್ದಿಷ್ಟ ಪದಕ್ಕೆ ಅಂದರೆ “ಸೌಲಭ್ಯಗಳು” ಇದಕ್ಕೆ ಗಮನ ಕೊಡುವುದು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ಅರ್ಥ ಆಗದೇ ಇರುವ ಮಾತನ್ನು ವಿವರಿಸುವಂತೆ ಕೇಳಬಹುದು. ಉದಾಹರಣೆಗೆ: ಸ್ವಲ್ಪವೇ ಕೇಳಿದ ಪಾಠದ ಸಾರಾಂಶವನ್ನು ವಿವರಿಸುವಂತೆ ಕೇಳುವುದು.
ಅವರು ಏನು ಹೇಳುತ್ತಿದ್ದಾರೆ ಎಂದು ಅರ್ಥವಾಗದಿದ್ದರೆ, ನೀವು ಈ ತಂತ್ರವನ್ನು ಬಳಸಬಹುದು:
ಅರ್ಥ ಆಗಬೇಕಿದ್ದ ಮಾತುಕತೆಯನ್ನು ಬೇಕಾದ ಹಾಗೆ ಸರಳ ರೀತಿಯಲ್ಲಿ ಅರ್ಥ ಮಾಡಿಕೊಳ್ಳಬಹುದು. ಉದಾಹರಣೆಗೆ: ತುಂಬಾ ಕಷ್ಟವಾದ ಪಾಠವನ್ನು ಸರಳವಾಗಿ ಅರ್ಥ ಮಾಡಿಕೊಳ್ಳುವುದು.
ಅವರು ಏನು ಹೇಳಬಹುದು ಅಥವಾ ಆ ಪರಿಸ್ಥಿತಿಯಲ್ಲಿ ಏನು ಕಷ್ಟ ಆಗಬಹುದು ಎಂದು ನಿರೀಕ್ಷೆ ಮಾಡಲು, ನೀವು ಈ ತಂತ್ರವನ್ನು ಬಳಸಬಹುದು:
ಸಂದರ್ಭಕ್ಕೆ ತಕ್ಕಂತೆ ಮೊದಲೇ ಏನು ಹೇಳಬೇಕು ಎಂದು ನಿರೀಕ್ಷೆ ಮಾಡಿ ತಯಾರಾಗುವುದು. ಉದಾಹರಣೆಗೆ:
- ತರಗತಿ ಪ್ರಾರಂಭವಾಗುವ ಮೊದಲು, ಉಪನ್ಯಾಸಕರನ್ನು ಸ್ಪಷ್ಟವಾಗಿ ನೋಡಲು ಅವಕಾಶ ಮಾಡಿಕೊಡುವ ಆಸನ ವ್ಯವಸ್ಥೆಗಳನ್ನು ಚರ್ಚಿಸಲು ಅವರು ಉಪನ್ಯಾಸಕರನ್ನು ಭೇಟಿಯಾಗುತ್ತಾರೆ. ಉಪನ್ಯಾಸಕರು ಮುಂಚಿತವಾಗಿ ಉಪನ್ಯಾಸ ಟಿಪ್ಪಣಿಗಳು ಅಥವಾ ಸ್ಲೈಡ್‌ಗಳನ್ನು ಒದಗಿಸುವಂತೆ ಅವರು ವಿನಂತಿಸಬಹುದು.
- ವೈದ್ಯಕೀಯ ಸಿಬ್ಬಂದಿಗೆ ಮುಂಚಿತವಾಗಿ ತಿಳಿಸುತ್ತಾರೆ ಮತ್ತು ಮಾತನಾಡುವಾಗ ವೈದ್ಯರು ನೇರವಾಗಿ ಅವರನ್ನು ಎದುರಿಸುವಂತೆ ವಿನಂತಿಸುತ್ತಾರೆ. ಅವರು ಪ್ರಮುಖ ಮಾಹಿತಿಯನ್ನು ಬರೆಯಲು ನೋಟ್‌ಪ್ಯಾಡ್ ಅನ್ನು ತರಬಹುದು ಅಥವಾ ಅವರ ಭೇಟಿಯ ಲಿಖಿತ ಸಾರಾಂಶಗಳನ್ನು ಕೇಳಬಹುದು.
ಅವರು ಏನು ಹೇಳಬಹುದು ಅಥವಾ ಆ ಪರಿಸ್ಥಿತಿಯಲ್ಲಿ ಏನು ಕಷ್ಟ ಆಗಬಹುದು ಎಂದು ನಿರೀಕ್ಷೆ ಮಾಡಿ ಸೂಕ್ತ ಬದಲಾವಣೆಯನ್ನು ಮಾಡಲು, ನೀವು ಈ ತಂತ್ರವನ್ನು ಬಳಸಬಹುದು:
ಸಂದರ್ಭಕ್ಕೆ ತಕ್ಕಂತೆ ಮಾತನ್ನು ಅರ್ಥ ಮಾಡಿಕೊಳ್ಳಲು ಪರಿಸರದಲ್ಲಿ ಬೇಕಾದ ಬದಲಾವಣೆ ಮಾಡುವುದು.
ಉದಾಹರಣೆಗೆ:
- ಮಾಹಿತಿಯನ್ನು ಕೇಳಿಸಿಕೊಳ್ಳಲು ಸರಿಯಾದ ಬೆಳಕು, ಮುಖದ ಹಾವ-ಭಾವ ತುಟಿ ಚಲನೆಗಳು ಮತ್ತು ಮುಂಭಾಗದಲ್ಲಿ ಕುಳಿತುಕೊಳ್ಳುವಂತಹ ಪರಿಸರ ಕುಶಲತೆಯನ್ನು ನಿರ್ವಹಿಸಲು ಪ್ರಯತ್ನಿಸುತ್ತಾರೆ.
- ಚಲನಚಿತ್ರ ನೋಡುವಾಗ ಉಪಶೀರ್ಷಿಕೆ ಬಳಸುವುದು ಶಬ್ದದೊಂದಿಗೆ ಮಾತನ್ನು ಅನುಸರಿಸಲು ಸಹಾಯ ಮಾಡುತ್ತದೆ.
- ನ್ಯಾಯಬೆಲೆ ಅಂಗಡಿಯಲ್ಲಿ ಕ್ಯೂ ನಲ್ಲಿ ನಿಂತಾಗ ಬೇರೆ ಭಾಷೆಯಲ್ಲಿ ಹೇಳುವ ಮಾಹಿತಿ ತಿಳಿಸಲು ಬೇರೆಯವರ ಸಹಾಯ ಕೇಳುವುದು.